Info 2

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಕಷ್ಟದ ಕೆಲಸ. ಮುಖದ ಮೇಲೆ ಚಿಕ್ಕ ಚಿಕ್ಕ ಕಪ್ಪು ಚುಕ್ಕೆಗಳಾಗುವುದು ಹೆಚ್ಚು. ಆರಂಭದಲ್ಲಿಯೇ ಇದರ ಕುರಿತಾಗಿ ಕಾಳಜಿ ತೆಗೆದುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಅವು ಮುಖದ ಮೇಲೆ ಶಾಶ್ವತ ಕಲೆಗಳಾಗಿ ಉಳಿದುಬಿಡಬಹುದು. ಆದ್ದರಿಂದ ಬೇಸಿಗೆಯಲ್ಲಿ ಮುಖದ ಆರೋಗ್ಯ ಕಾಪಾಡಿಕೊಂಡು, ಸೌಂದರ್ಯ ಹೆಚ್ಚಿಕೊಳ್ಳಲು ಕೆಲವು ಸರಳ ಉಪಾಯಗಳು ಇಲ್ಲಿವೆ.

• ಟೊಮೆಟೊ ಹಣ್ಣಿನ ರಸವನ್ನು ಚೆನ್ನಾಗಿ ಮುಖದ ಮೇಲೆ ಹಚ್ಚಿಕೊಂಡು ಮಸಾಜು ಮಾಡಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

• ಸೌತೆಕಾಯಿಯ ಸ್ಲೈಸ್ಗಳನ್ನು ಮಾಡಿಕೊಂಡು, ಅದನ್ನು ನಿಧಾನವಾಗಿ ಮುಖದ ಮೇಲೆ ಉಜ್ಜಿಕೊಳ್ಳುವುದರಿಂದ ಮುಖದ ಚರ್ಮದಲ್ಲಿ ತೇವಾಂಶ ಹೆಚ್ಚುತ್ತದೆ. ಅಲ್ಲದೇ ಸ್ಲೈಸ್ಗಳನ್ನು ಕಣ್ಣುಗಳ ಮೇಲೆ ಇಟ್ಟುಕೊಳ್ಳುವುದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ.

• ರೋಸ್ ವಾಟರನ್ನು ಮುಖಕ್ಕೆ ಬಳಸುವುದರಿಂದ ಕಪ್ಪು ಚುಕ್ಕೆಗಳು ಕಡಿಮೆಯಾಗುತ್ತವೆ.

• ಹಾಲಿನ ಕೆನೆಯನ್ನು ಅರಿಸಿನ ಪುಡಿಯೊಂದಿಗೆ ಕಲಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕಪ್ಪುಚುಕ್ಕೆಗಳನ್ನು ತಡೆಗಟ್ಟಬಹುದು ಹಾಗೂ ಕಣ್ಣಿನ ಸುತ್ತಲಿನ ಕಪ್ಪು ಉಂಗುರವನ್ನು ಕಡಿಮೆ ಮಾಡಿಕೊಳ್ಳಬಹುದು.

• ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಕೊಳ್ಳಬೇಕು. ನಂತರ ಆ ಕಿತ್ತಳೆ ಪೌಡರನ್ನು ನೀರಿನೊಂದಿಗೆ ಕಲಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

• ಲಿಂಬೆ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಮೇಲಿನ ಬೆವರು ಗುಳ್ಳೆಗಳು ಕಡಿಮೆಯಾಗುತ್ತವೆ.

Comments

Popular Posts