ನಮಸ್ಕಾರದ ಮಹತ್ತ್ವ

ನಮಸ್ಕಾರದ ಮಹತ್ತ್ವ

ನಮಸ್ಕಾರದ ಭಾರತೀಯ ಸಂಸ್ಕ್ರತಿಯ ಒಂದು ಅವಿಭಾಜ್ಯ ಅಂಗವಾಗಿದೆ. ದೇವರಿಗೆ ನಾವು ನಮಸ್ಕರಿಸುತ್ತೇವೆ.

ನಮ್ಮ ಹಿರಿಯರಿಂದ ಕಲಿತ ಒಂದು ಸಂಪ್ರದಾಯ. ಗುರು ಹಿರಿಯರ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು,ಹಿರಿಯರಿಗೆ ತಲೆಬಾಗಿ ಆಶೀರ್ವಾದ ಪಡೆಯುದರಿಂದ ಯಾವ ಮನಷ್ಯನು ಖಂಡಿತ ಚಿಕ್ಕವನಾಗುವುದಿಲ್ಲ.ಇದೊಂದು ಸುಂದರ ಸಂಪ್ರದಾಯ.ಮದುವೆ, ಮುಂಜಿ (ಉಪನಯನ),ವಿಶೇಷ,ಕಾರ್ಯಕ್ರಮ,ಹಬ್ಬ-ಹರಿದಿನಗಳಲ್ಲಿ ಹಿರಿಯರಿಂದ ಆಶೀರ್ವಾದ ಪಡೆಯುವುದು ಸಂಪ್ರದಾಯ.ಗುರುಹಿರಿಯರಿಗೆ ತಂದೆತಾಯಿಯರಿಗೆ ನಾವು ನಮಸ್ಕರಿಸಿ ಗೌರವ ತೋರಿಸುತ್ತೇವೆ. ಇಷ್ಟೇ ಅಲ್ಲ ನಮ್ಮ ಪರಿಚಯದವರಾದರೆ ಎದುರು ಸಿಕ್ಕಲಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಬೇಕಾದರೆ ನಮಸ್ಕಾರ ಹೇಳುತ್ತೇವೆ. ಅನೇಕರ ಭಾವನೆ ಎದುರು ಸಿಕ್ಕವರ ವಯಸ್ಸು, ಹಿರಿತನ ಇವುಗಳಲೆಲ್ಲಾ ನಮಸ್ಕಾರ ಹೇಳುವುದು ಮುಖ್ಯವಲ್ಲ, ಬದಲಾಗಿ ನಿಮ್ಮಲ್ಲಿರುವ ದೇವರ ಅಂಶಕ್ಕೆ ನಮಸ್ಕಾರ ಹೇಳುವ ಮೂಲಕ ಗೌರವ ಸಲ್ಲಿಸುತ್ತಿದ್ದೇನೆ ಎಂಬುದು.

ಋಗ್ವೇದದ ಈ ಕೆಳಗಿನ ಶ್ಲೋಕ ನಮಸ್ಕಾರದ ಮಹತ್ವವನ್ನು ಬಹಳ ಚೆನ್ನಾಗಿ ತಿಳಿಸುತ್ತದೆ.

"ನಮ ಇದುಗ್ರಂ ನಮ ಆ ವಿವಾಸೆ
ನಮೋ ದಾಧಾರ ಪೃಥಿವೀಮುತ ದ್ಯಾಮ್ |
ನಮೋ ದೇವೇಭ್ಯೋ ನಮ ಈಶ ಏಷಾಂ
ಕೃತಂ ಚಿದೇನೋ ನಮಸಾ ವಿವಾಸೇ" ||

ಅರ್ಥ : ದೇವತೆಗಳಿಗರ್ಪಿಸಿದ ನಮಸ್ಕಾರ ಅತ್ಯಧಿಕವಾದ ಪ್ರಭಾವವುಳ್ಳದ್ದಾಗಿದೆ. ಆ ನಮಸ್ಕಾರವನ್ನೇ ಆಶ್ರಯಿಸಿ ಪೂಜಿಸುತ್ತೇನೆ. ಆ ನಮಸ್ಕಾರ ರೂಪವಾದ ಕರ್ಮವೇ ಪೃಥ್ವಿಯನ್ನೂ ದ್ಯುಲೋಕವನ್ನೂ ಧರಿಸುತ್ತದೆ. ಆದುದರಿಂದಲೇ ದೇವತೆಗಳಿಗೆ ನಮಸ್ಕಾರವನ್ನು ಅರ್ಪಿಸುತ್ತೇವೆ. ಈ ದೇವತೆಗಳಿಗೆ ಅರ್ಪಿಸಿದ ನಮಸ್ಕಾರವೇ ಲೋಕವನ್ನೆಲ್ಲಾ ಆಳುತ್ತದೆ. ಅಜ್ಞಾನದಿಂದ ಕೂಡಿದ ಪಾಪವನ್ನು ನಮಸ್ಕಾರ ರೂಪವಾದ ಕ್ರಿಯೆಯಿಂದಲೇ ನಾಶವಾಗುವಂತೆ ಮಾಡಬಲ್ಲೆನು.

ಕೃಪೆ; ಪಾಂಚಜನ್ಯ

Comments

Popular Posts